ಪರಿಕಲ್ಪನೆ
ಹರೀಶ್ ಆರ್.
9448602810
harish.yr@gmail.com
ನಾಯಕ: ನಾರಾಯಣ ರಾವ್.
ವಯಸ್ಸು: ೫೦
ಉದ್ಯೂಗ: ಐ ಏ ಯಸ್ ಅಧಿಕಾರಿ.
FADE IN:
EXT. ಊರಿನ ಹೊರ ವಲಯ - NIGHT
ಜನಗಳಿಲ್ಲದ ರಸ್ತೆಯ ಪಕ್ಕದಲಿ ಒಂದು ಕಾರು ನಿಂತಿರುವುದು ರಾತ್ರಿಯ ಕತ್ತಲಲ್ಲಿ ಅಸ್ಪಷ್ಟವಾಗಿ ಕಾಣಿಸುತ್ತಿದೆ. ನಿಶಬ್ದವಾಗಿರುವ ಆ ಪ್ರದೇಶದಲ್ಲಿ ನಾಯಿಗಳು ಬೊಗಳುತ್ತಿರುವ ಕೂಗು ಸ್ಪಷ್ಟವಾಗಿ ಕೇಳುತ್ತಿದೆ.
ಕಾರಿನ ಕಡೆ ತಿರುಗಿ ತನ್ನೆರಡು ಕೈಗಳ ಮದ್ಯ ಮುಖವಿಟ್ಟು ವ್ಯಕ್ತಿಯೊಬ್ಬರು ನಿಂತಿದ್ದಾರೆ. ಮದ್ಯವಯಸ್ಕರ ಹಾಗೆ ಕಾಣುತ್ತಿರುವ ಆ ವ್ಯಕ್ತಿ neat ಆಗಿ dress ಮಾಡಿ ಕೊಂಡಿದ್ದಾರೆ. Mobile ring ಆಗುತ್ತಿರುವ ಶಬ್ದ ಕೇಳುತ್ತಿದ್ದಂತೆ ತನ್ನ ಜೇಬಿನಿಂದ ಮೊಬೈಲ್ ಹೊರತೆಗೆದು ಮಾತನಾಡುತ್ತಿದ್ದಾರೆ.
27-28 ರ ಅಸುಪಾಸಿನ ಹರೆಯದ ಹುಡುಗನೊಬ್ಬ ಬೈಕ್‌ನಲ್ಲಿ ಬಂದು ಕಾರಿನ ಪಕ್ಕದಲ್ಲಿ ನಿಲ್ಲುತ್ತಾನೆ. ಕಪ್ಪನೆಯ Jacket ತೊಟ್ಟಿರುವ ಆ ಹುಡುಗ ತಲೆಗೆ monkey cap ತೊಟ್ಟಿದ್ದಾನೆ.
ಅತ್ತಿತ್ತ ಒಮ್ಮೆ ನೋಡುವ Rao ಕೂಡ ಕಾರಿನ ಒಳಹೋಗಿ ಕೂರುತ್ತಾರೆ.
INT. ಕಾರಿನ ಒಳಭಾಗ
Rao ಓಳ ಬರುತ್ತಿದ್ದಂತೆ ಆ ಹುಡುಗ ಸ್ವಲ್ಪ ಸರಿದು ಕೂರುತ್ತ ತನ್ನ ಜಾಕೆಟ್‌ನ zip ತೆಗೆದು ಅದರಿಂದ ಒಂದು gun ಹೊರತೆಗೆಯುತ್ತಾನೆ. Gun ಅನ್ನು Rao ಅವರಿಗೆ ತೋರಿಸುತ್ತ ಅದರ ಬಳಕೆಯ ಬಗ್ಗೆ ವಿವರಿಸುತ್ತಿದ್ದಾನೆ. ಹುಡುಗನಿಂದ gun ಪಡೆಯುವ Rao ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಆ ಹುಡುಗ ತನ್ನ ಇನ್ನೊಂದು ಜೇಬಿನಿಂದ ಒಂದು box ತಗೆದು Raoಗೆ ಕೊಡುತ್ತಾನೆ.
ಹುಡುಗನಿಂದ box ಪಡೆಯುವ Rao ತನ್ನ ಪರ್ಸ್ ತೆಗೆದು ಅದರಿಂದ ಸಾವಿರದ ಕೆಲವು ನೂಟುಗಳನ್ನು ತಗೆದು ಹುಡುಗನಿಗೆ ನೀಡುತ್ತಾರೆ. ಹಣವನ್ನೂಮ್ಮೆ ಎಣಿಸುವ ಆ ಹುಡುಗ ತಲೆ ಕೆರೆದುಕೊಳ್ಳುತ್ತ Rao ಕಡೆ ನೋಡುತ್ತಾನೆ.
ಕಾರಿನಿಂದ ಕೆಳಗಿಳಿಯುವ ಆ ಹುಡುಗ ಬಾಗಿಲು ಹಾಕುತ್ತಲೆ ಮತ್ತೆ ಬಾಗಿಲು ತೆಗೆದು ಬಾಗಿ Rao ಕಡೆ ನೋಡುತ್ತಾನೆ.
EXT. ಕಾರಿನ ಹೊರಬಾಗ
ಆಸಿಫ್ ಕಾರಿನ ಬಾಗಿಲನ್ನು ಹಾಕಿ ತನ್ನ ಬೈಕ್ ಹತ್ತಿ ಹೊರಟುಹೋಗುತ್ತಾನೆ.
INT. ಕಾರಿನ ಒಳಗೆ
Gun ಮತ್ತೊಮ್ಮೆ ಗಮನಿಸುವ Rao ಅದನ್ನು ತಮ್ಮ ಬಲಗೈಯಲ್ಲಿ ಹಿಡಿದು ಅದರ ಗ್ರಿಪ್ ನೋಡಿದನಂತರ ಮುಂದಿನ ಸೀಟಿಗೆ ತನ್ನ ತಲೆ ಇಟ್ಟು ಎಡಗೈಯಿಂದ ತನ್ನ ಕಣ್ಣುಗಳನ್ನು ಒತ್ತಿಹಿಡಿಯುತ್ತಾರೆ.
EXT. ತೆಂಗಿನ ತೋಟ NIGHT
ವೃತ್ತಾಕಾರದ ಗುರುತುಗಳಿರುವ ಹಾಳೆಯೊಂದನ್ನು ಮರಕ್ಕೆ ನೇತುಹಾಕುವ Rao ಮರದಿಂದ ಸ್ವಲ್ಪದೂರ ನಿಂತಿರುವ ತನ್ನ ಕಾರಿನ ಕಡೆ ಬರುತ್ತಾರೆ. ಬೇರೆಯದೆ ಬಟ್ಟೆಯಲ್ಲಿರುವ Rao ಇಂದು ಕೂಡ ನೀಟಾಗಿ ಡ್ರೆಸ್ ಮಾಡಿದ್ದಾರೆ.
ಕಾರಿನ ಮುಂದಿನ ಬಾಗಿಲು ತೆಗೆದು ಅದರ box ಒಂದರಿಂದ gun ಹೊರತೆಗೆದು ಬುಲೆಟ್‌ಗಳನ್ನು ತುಂಬಿಸುತ್ತಿದ್ದರೆ ಅವರ ಕೈಗಳು ಸ್ವಲ್ಪ ಅದರುತ್ತಿವೆ. ಸಿದ್ದವಾದ gun ಒಮ್ಮೆ ನೋಡುವ Rao ಅದನ್ನು ತಮ್ಮ ಬಲಗೈ ಒಂದರಲ್ಲೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಕೈಗಳ ಕಂಪನ ಮತಷ್ಟು ಜಾಸ್ತಿಯಾಗುತ್ತಿದೆ. ತನ್ನ ಎಡಗೈನ ಸಹಾಯದಿಂದ gun ಮೇಲೆತ್ತುವ Rao ಒಂದು ಸಾರಿ ಟ್ರಿಗರ್ ಒತ್ತುತ್ತಾರೆ. ಆದರೆ ಭಯುದಿಂದ ಸಂಪೂರ್ಣವಾಗಿ ಗುರಿ ತಪ್ಪುತ್ತದೆ. ಬಂದೂಕಿನ ಶಬ್ದ ಮಾತ್ರ ಜೋರಾಗಿಯೇ ಕೇಳುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಹಕ್ಕಿಗಳು ಹಾರುವ ಶಬ್ದ ಕೂಡ ಕೇಳುತ್ತದೆ.
ಕೆಳಗೆ ಕುಸಿದು ಕೂರುವ Rao ತನ್ನಿಂದಾಗುವುದಿಲ್ಲ ಎಂಬಂತೆ ತಲೆಯಾಡಿಸುತ್ತ ಉಕ್ಕಿ ಬರುತ್ತಿರುವ ದು:ಖದಿಂದ ಅಳುತ್ತಿದ್ದರೆ.
ಗಟ್ಟಿ ಮನಸ್ಸು ಮಾಡಿದವರಂತೆ ಮೇಲೇಳುವ Rao 2-3 ಸಾರಿ ಒಂದಾದ ನಂತರ ಒಚಿದರಂತೆ ಗುಂಡು ಹಾರಿಸುತ್ತಾರೆ.
EXT. ತೆಂಗಿನ ತೋಟ NIGHT
ಕಾರು ವಿರುದ್ದ ದಿಕ್ಕಿನಲ್ಲಿ ನಿಂತಿದೆ, Rao ಅವರ ಡ್ರೆಸ್ಸ್ ಕೂಡ ಬದಲಾಗಿದೆ. ಆದರೆ ಅವರ ಕಣ್ಣುಗಳು ಮಾತ್ರ ಮರದಲ್ಲಿರುವ ಆ ಗುರುತಿನ ಹಾಳೆಯ ಮೇಲೆ ನಾಟಿದೆ. ಮತ್ತೆ 3-4 ಬಾರಿ ಗುಂಡು ಹಾರಿಸುತ್ತಾರೆ.
Rao ಅವರ ಕಾರು ಒಂದು ಬಂಗಲೆಯ ಮುಂದೆ ಬಂದು ನಿಲ್ಲುತ್ತದೆ. Blazer ತೊಟ್ಟಿರುವ Rao ಅವರು ಕಾರಿನ Staringಗೆ ತನ್ನ ತಲೆಯಿಟ್ಟು ಕುಳಿತ್ತಿದ್ದರು ಅವರ ಕಣ್ಣುಗಳು ಮುಚ್ಚಿಲ್ಲ. ಕಾರಿನಲ್ಲಿರುವ gun ತೆಗೆದುಕೊಂಡು ಬುಲೆಟ್ಸ್ box ಒಮ್ಮೆ ನೋಡುತ್ತಾರೆ. ಅದರಲ್ಲಿ ಬರೆ 5-6 ಬುಲೆಟ್‌ಗಳು ಮಾತ್ರ ಉಳಿದಿವೆ. ಅದನ್ನೆಲ ತಗೆದು gunಗೆ ತುಂಬಿಸಿ ಅದನ್ನು ತನ್ನ ಕೋಟ್ ಒಳಗೆ ಇಟ್ಟುಕೊಂಡು ಮತ್ತೊಮ್ಮೆ ಯಾರಿಗು ಕಾಣಿಸುವುದಿಲ್ಲವ ಎಂದು ಪರೀಕ್ಷಿಸಿಕೊಳ್ಳುತ್ತಾರೆ.
ಕಾರಿನಿಂದ ಕೆಳಗೆ ಇಳಿಯುವ Rao ಕಾರಿನ ಬಾಗಿಲನ್ನು ಹಾಕದೆ ಮನೆಯ ಬಾಗಿಲಿನ ಕಡೆ ನೆಡೆಯುತ್ತಿದ್ದಾರೆ.
EXT. ಮನೆಯ ಮುಂಬಾಗ - NIGHT
Rao ಮನೆಯ ಕಾಲಿಂಗ್ ಬೆಲ್ ಅನ್ನು ಹಲವಾರು ಸಾರಿ ಒತ್ತುತ್ತಿದ್ದಾರೆ. ಕೆಲವು ಸಮಯದ ನಂತರ ಬಾಗಿಲು ತೆಗೆದುಕೊಳ್ಳುತ್ತದೆ. ಎದುರಿಗೆ ಒಬ್ಬಳು ಮದ್ಯವಯಸ್ಕ ಹೆಂಗಸೊಬ್ಬಳು ಪೂಜೆಯ ತಟ್ಟೆಯನ್ನು ಕೈಯಲ್ಲಿ ಹಿಡಿದಿದ್ದಾರೆ. Rao ಅನ್ನು ನೂಡುತ್ತಿದ್ದಂತೆ ಆಕೆ ಸಣ್ಣದೊಂದು ಕಿರುನಗೆ ಬೀರುತ್ತಾರೆ.
INT. ಮನೆಯ ಹಾಲ್
ಹೆಂಡತಿ ಬಾಗಿಲು ಹಾಕಿ ಗಂಡನ ಮುಖವನ್ನೇ ನೋಡುತ್ತ ಪಕ್ಕದಲ್ಲೇ ಇರುವ ದೇವರ ಮನೆ ಕಡೆಗೆ ನೆಡೆಯುತ್ತಿದ್ದರೆ.
Rao ಕುಳಿತಿರುವ ಸೋಫಾದ ಮುಂದಿರುವ T.V.ಯಲ್ಲಿ T.V.-9 Channel ಪ್ರಸಾರವಾಗುತ್ತಿದೆ. ಅದರಲ್ಲಿ ಭ್ರಷ್ಟಾಜಾರದ ಒಂದು ಕಿರುಚಿತ್ರ ಬರುತ್ತಿದೆ. ತನ್ನ ಪೆನ್ಷನ್‌ನ ಹಣಕ್ಕಾಗಿ ಸರಕಾರಿ ಕಛೇರಿಯಲ್ಲಿ ಅಂಗಲಾಚುತ್ತಿರುವ ವಯಸ್ಸಾದ ವೃದ್ದ ವ್ಯಕ್ತಿಯೊಬ್ಬ ತನ್ನ ಬಳಿಯಿರುವ ಕನ್ನಡಕ, ಕೈ ಚೀಲ, ಬಟ್ಟೆ ಎಲ್ಲವನ್ನು ಒಂದೊಂದಾಗಿ ಬಿಚ್ಚಿ ಆಫೀಸರ್ ನ ಟೇಬಲ್‌ನ ಮುಂದೆ ಇಡುತ್ತಿದ್ದಾರೆ.
ಇದನ್ನು ನೋಡುತ್ತಿದ್ದಂತೆ Rao ನ ಕೈಗಳು ಅದುರಲಾರಂಬಿಸುತ್ತವೆ. ಮುಖ ಬೆವತು ಹೋಗಿದೆ. ಹೆದರುತ್ತಲೆ ಮೇಲೇಳುವ Rao ದೇವರ ಕೋಣೆಯ ಬಳಿ ಬರುತ್ತಾರೆ. ಗಂಡ ಬಂದದ್ದನ್ನು ಗಮನಿಸುವ ಹೆಂಡತಿ ತಟ್ಟೆ ಹಿಡಿಡು ಗಂಡನ ಮುಂದೆ ಬಂದು ತಾವೆ ಅವರ ಹಣೆಗೆ ಕುಂಕುಮ ಇಟ್ಟು ಹೂ ಕೊಡಲು ಮುಂದಾಗುತ್ತಾರೆ.
ತುಂಬಿದ ಕಣ್ಣುಗಳಿಂದ ಹೆಂಡತಿಯನ್ನೊಮ್ಮೆ ನೋಡುವ Rao gun ತಗೆದು ತನ್ನ ತಲೆಗೆ 2 ಬಾರಿ ಗುಂಡು ಹಾರಿಸಿ ಕೊಳ್ಳುತ್ತಾರೆ ಮತ್ತು ಕೆಲವೇ ಕ್ಷಣಗಳಲ್ಲಿ ಅವರು ತನ್ನ ಹೆಂಡತಿಯ ಪಕ್ಕ ಉರಳಿ ಬೀಳುತ್ತಾರೆ.
T. V. ಯಲ್ಲಿನ News ನ ಶಬ್ದ ಕೇಳುತ್ತಿದೆ.
